NEWS FLASH

/home/student/Desktop/Flash.gif ನಮ್ಮ ಶಾಲೆಯ ನೂತನ ಎರಡು ಬ್ಲಾಗುಗಳು ಶುಭಾರಂಭಗೊಂಡಿವೆ="https://www.11264ssaupschevar.blogspot.com">&www.chevarschool.blogspot.com.........OUR TWO NEW BLOGS LAUNCHED.VISIT US..

VISIT OUR BLOG

ನಮ್ಮ ಇನ್ನೊಂದು ಬ್ಲಾಗನ್ನು ವೀಕ್ಷಿಸಿ.....www.11264ssaupschevar.blogspot.in............

Wednesday, September 17, 2014

Ozone Day Celebration


ಚೇವಾರಿನಲ್ಲಿ ಓಝೋನ್ ದಿನಾಚರಣೆ






ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಓಝೋನ್ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಹಿರಿಯ ಅಧ್ಯಾಪಕರಾದ ಶ್ರೀ ಶಂಕರ ನಾರಾಯಣ ಭಟ್,ವಾತಾವರಣವನ್ನು ರಕ್ಷಿಸಲು ನಾವೆಲ್ಲರೂ ಶ್ರಮಿಸಬೇಕೆಂದು ಕರೆಯಿತ್ತರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಧ್ಯಾಪಕ ರವಿಕುಮಾರ್,ವಾತಾವರಣದ ವಿವಿಧ ಪದರಗಳ ಚಿತ್ರವನ್ನು ಪ್ರದರ್ಶಿಸಿ,ವಿವರಿಸಿದರು. ಓಝೋನ್ ಅಂದರೆ ಏನು,ಅದರ ಪ್ರಾಧಾನ್ಯತೆ,ಅದರ ಕ್ಷಯಿಸುವಿಕೆ ಕುರಿತು ಚಿತ್ರ ಸಹಿತ ವಿವರಿಸಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಧ್ಯಾಪಕ ಪ್ರಸಾದ್ ರೈ,ಮನುಷ್ಯನ ಅನುಕೂಲತೆಗಾಗಿ,ಪರಿಸರ, ವಾತಾವರಣವನ್ನು,ಹಾಳು ಮಾಡುತ್ತಿರುವುದು ವಿಷಾದನೀಯ,ಇದನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದರು. . ಓಝೋನ್ ಹಾಗೂ ಬಹ್ಯಾಕಾಶ ಕುರಿತಾದ ರಸಪ್ರಶ್ನೆ ಸ್ಪರ್ಧೆ, ಏರ್ಪಡಿಸಲಾಯಿತು
ವಿದ್ಯಾರ್ಥಿಗಳು ಪ್ರಬಂಧಗಳನ್ನು ಮಂಡಿಸಿದರು.ಜೈನಬತ್ ಅಸ್ಮೀನಾ ಕಾರ್ಯಕ್ರಮ ನಿರೂಪಿಸಿದರು.ಹಂಸಾನಾ ಸ್ವಾಗತಿಸಿದರು.ವಿದ್ಯಾಶ್ರೀ ವಂದಿಸಿದರು.

Monday, September 15, 2014

OZONE DAY


ಸೆಪ್ಟೆಂಬರ್-16 ವಿಶ್ವ ಓಝೋನ್ ದಿನ

ಮ್ಮ ಭೂಮಿಯು, ಜೀವಿಗಳಿರುವ ಏಕೈಕ ಸುಂದರ ಗ್ರಹವಾಗಿದೆ.ಸೂರ್ಯನನ್ನುಕೇಂದ್ರವಾಗಿರಿಸಿಕೊಂಡು ಇತರ ಗ್ರಹಗಳೊಂದಿಗೆ ಸೌರವ್ಯೂಹದಲ್ಲಿ ಸುತ್ತುಬರುತ್ತಿದೆ. ಭೂಮಿಗೆ ಒಂದು ವ್ಯವಸ್ಥಿತವಾದ ವಾತಾವರಣವಿದೆ.ಈ ವಾತಾವರಣವು . ಭೂಮಿಯ ಮೇಲಿರುವ ಜೀವಜಾಲಗಳನ್ನು ರಕ್ಷಿಸಿ ಪೋಷಿಸುತ್ತದೆ. ಈ ವಾತಾವರಣದಲ್ಲಿ ಓಝೋನ್ ಎಂಬ ವಿಶಿಷ್ಟವಾದ ಒಂದು ಅನಿಲ ಪದರವಿದೆ.ಈ ಓಝೋನ್ ಪದರವು ಸೂರ್ಯನಿಂದ ಬರುವ ನೇರಳಾತೀತಕಿರಣಗಳಲ್ಲಿರುವ ಹಾನಿಕಾರಕ ವಿಕಿರಣಗಳನ್ನುತಡೆದು ಭೂಮಿಗೆ ಬೀಳದಂತೆ ಮಾಡುತ್ತದೆ. ಈ ಹಾನಿಕಾರಕ ವಿಕಿರಣಗಳು, ನಿರಂತರವಾಗಿ ಮನುಷ್ಯನ ಮೈಮೇಲೆ ಬಿದ್ದಲ್ಲಿ, ಚರ್ಮದ ಕ್ಯಾನ್ಸರ್ ನಂತಹ ರೋಗಗಳು ಉಂಟಾಗಬಹುದು.ಇದು ಜೀವಜಾಲಗಳ ನಾಶಕ್ಕೂ ನಾಂದಿಯಾಗಬಹುದು.                                           ಇಂದು ಮನುಷ್ಯನ ಲೋಭದಿಂದಾಗಿ ಈ ಓಝೋನ್ ಪದರವು ನಾಶವಾಗುತ್ತಿದೆ.ರೆಫ್ರಿಜರೇಟರ್,ಕೃತಕ ಸುಗಂಧದ್ರವ್ಯಗಳು ಏ.ಸಿ,,ಶೇವಿಂಗ್ ಕ್ರೀಮ್ ಮುಂತಾದವುಗಳ ಉಪಯೋಗ ದಿಂದ ಉಂಟಾಗುವ ಕ್ಲೋರೋಫ್ಲೋರೋಕಾರ್ಬನ್ ಓಝೋನ್ ಪದರವನ್ನು ತೆಳ್ಳಗಾಗಿಸುತ್ತದೆ.

Engineer's Day


ಸೆಪ್ಟೆಂಬರ್-15 ರಾಷ್ಟ್ರೀಯ ಇಂಜಿನಿಯರ್ ಗಳ ದಿನ

                         ಭಾರತದ ಅಸಂಖ್ಯ ಭೂಪ್ರದೇಶಕ್ಕೆ ನೀರು ಹರಿಸಿದ ಭಗೀರಥನಾಗಿ,ಪ್ರತಿಯೊಬ್ಬ ಪ್ರಜೆಗೆ ಮೂಲಭೂತ ಶಿಕ್ಷಣ ನೀಡಲು ಶ್ರಮಿಸಿದ ಶಿಕ್ಷಣತಜ್ಞನಾಗಿ,ಬ್ರಿಟಿಷರ ಕಾಲದಲ್ಲೇ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ಹರಿಕಾರನಾಗಿ ನಾಡಿನ ಜನಮನದಲ್ಲಿ ಶಾಶ್ವತವಾಗಿ ನೆಲೆಸಿದವರು,ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ.ಅವರ ಜನ್ಮ ದಿನ ವನ್ನು ಇಂಜಿನಿಯರ್ ಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.
ಮೈಸೂರಿನ ದಿವಾನರೂ,ಮುಖ್ಯ ಇಂಜಿನಿಯರ್ ಆಗಿದ್ದ,ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು 1860ರ ಸೆಪ್ಟೆಂಬರ್-15ರಂದು ಕೋಲಾರದ ಮುದ್ದೇನ ಹಳ್ಳಿಯಲ್ಲಿ ಜನಿಸಿದರು. ತಂದೆ ಶ್ರೀನಿವಾಸ ಶಾಸ್ತ್ರಿ,ತಾಯಿ ವೆಂಕಟ ಲಕ್ಷ್ಮಿ.

Hindi Divas


ಸೆಪ್ಟೆಂಬರ್-14 ಹಿಂದಿ ದಿನ

ಸೆಪ್ಟೆಂಬರ್ 14ನ್ನು ದೇಶದಾದ್ಯಂತ ಹಿಂದಿ ದಿನವನ್ನಾಗಿ ಆಚರಿಸಲಾಗುತ್ತಿದೆ.ಭಾರತದಲ್ಲಿ ಹೆಚ್ಚಿನ ಜನರ ಮಾತೃಭಾಷೆ ಹಿಂದಿಯಾಗಿದ್ದು,1949ರ ಸೆಪ್ಟೆಂಬರ್ 14ರಂದು ಈ ಭಾಷೆಯನ್ನು ಸಂವಿಧಾನದ ಅಧಿಕೃತ ಆಡಳಿತ ಭಾಷೆಯನ್ನಾಗಿ ಅಂಗೀಕರಿಸಲಾಯಿತು.1950ರ ಆರ್ಟಟಿಕಲ್343ರಂತೆ ದೇವನಾಗರಿ ಲಿಪಿಯ ಹಿಂದಿಯನ್ನು ದೇಶ ಬಾಷೆಯಾಗಿ ಜ್ಯಾರಿಗೆ ತರಲಾಯಿತು.ತ್ರಿಭಾಷಾ ಸೂತ್ರದನ್ವಯ ಹಿಂದಿ,ಇಂಗ್ಲಿಷ್,ಮಾತೃ ಭಾಷೆಯನ್ನು ಶಾಲಾ ಪಠ್ಯ ಕ್ರಮದಲ್ಲಿ ಅಳವಡಿಸಲಾಯಿತು.
ಒಂದು ಭಾಷೆಯು ಒಂದು ಸಂಸ್ಕೃತಿಯನ್ನು ಬಿಂಬಿಸಿ ಬೆಳೆಸಲು ಸಹಕಾರಿಯಾಗಿದ್ದು,ಎಲ್ಲಾ ಭಾಷೆಗಳನ್ನು ಪ್ರೋತ್ಸಾಹಿಸಿ ಸುಂದರ ಸಮಾಜ ನಿರ್ಮಿಸೋಣ.


Monday, September 8, 2014

ONAM CELEBRATION



ಚೇವಾರು ಶಾಲೆಯಲ್ಲಿ ಓಣಂ ಆಚರಣೆ

ಕುಂಬಳೆ: ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓಣಂ ಹಬ್ಬವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಕಾರ್ಯಕ್ರಮವನ್ನು ಶಾಲಾ ಮುಖ್ಯಶಿಕ್ಷಕರಾದ ಶ್ಯಾಮ ಭಟ್ ಉದ್ಘಾಟಿಸಿದರು.ಎಲ್ಲಾ ತರಗತಿಗಳಲ್ಲೂ ವಿದ್ಯಾರ್ಥಿಗಳು ಹೂವಿನ ರಂಗೋಲಿ ರಚಿಸಿದರು.ತದನಂತರ ವಿದ್ಯಾರ್ಥಿಗಳು, ಮಹಾಬಲಿ ಚಕ್ರವರ್ತಿ ಹಾಗೂ ಇತರ ವಿವಿಧ ವೇಷಗಳನ್ನು ಧರಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.ಶಿಕ್ಷಕ ಕಾರ್ಯದರ್ಶಿ ಸ್ಕೌಟ್ ಅಧ್ಯಾಪಕ ವಿನೋದ್ ರ ನೇತೃತ್ವದಲ್ಲಿ ಮೆರವಣಿಗೆಯನ್ನು ಏರ್ಪಡಿಸಲಾಯಿತು. ಶಿಕ್ಷಕರಾದ ಶಂಕರ ನಾರಾಯಣ ಭಟ್,ಶ್ರೀಮತಿ ಸರಸ್ವತಿ, ಶ್ರೀಮತಿ ರಾಜೇಶ್ವರಿ ಶ್ರೀಮತಿ ಪ್ರಮೀಳಾ,ರವಿಕುಮಾರ್,ಪ್ರಸಾದ್ ರೈ, ಶ್ರೀಮತಿ ಪುಷ್ಪಲತಾ,ಗೋಪಾಲ ಕೃಷ್ಣ ಭಟ್ ಸಹಕರಿಸಿದರು.



ಚೇವಾರು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ಕುಂಬಳೆ: ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಸಭಾಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಪರಮೇಶ್ವರ ಪಾವಲುಕೋಡಿ ವಹಿಸಿದರು.ಪೈವಳಿಕೆ ಪಂಚಾಯತು ಸದಸ್ಯೆ ಶ್ರೀಮತಿ ಸುಬೈದಾ ಯಂ.ಪಿ, ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮುಖ್ಯಶಿಕ್ಷಕ ಶ್ರೀ ಶ್ಯಾಮಭಟ್,ದಿನದ ಮಹತ್ವವನ್ನು ವಿವರಿಸಿದರು.ಇದೇ ಸಂದರ್ಭದಲ್ಲಿ  ವಿದ್ಯಾರ್ಥಿಗಳು, ಶಿಕ್ಷಕರ ದಿನಾಚರಣೆ ಅಂಗವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣವನ್ನು ಆಲಿಸಿದರು.ನಂತರ ವಿದ್ಯಾರ್ಥಿಗಳು ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದರು.ಶಂಕರನಾರಾಯಣ ಭಟ್ ಅತಿಥಿಗಳನ್ನು ಸ್ವಾಗತಿಸಿದರು.ರವಿಕುಮಾರ್ ವಂದಿಸಿದರು.ಚೇವಾರು ವಿನೋದ ಕಾರ್ಯಕ್ರಮವನ್ನು ನಿರೂಪಿಸಿದರು.