NEWS FLASH

/home/student/Desktop/Flash.gif ನಮ್ಮ ಶಾಲೆಯ ನೂತನ ಎರಡು ಬ್ಲಾಗುಗಳು ಶುಭಾರಂಭಗೊಂಡಿವೆ="https://www.11264ssaupschevar.blogspot.com">&www.chevarschool.blogspot.com.........OUR TWO NEW BLOGS LAUNCHED.VISIT US..

VISIT OUR BLOG

ನಮ್ಮ ಇನ್ನೊಂದು ಬ್ಲಾಗನ್ನು ವೀಕ್ಷಿಸಿ.....www.11264ssaupschevar.blogspot.in............

Sunday, November 8, 2015

DIVALI


ಬೆಳಕಿನ ಹಬ್ಬ ದೀಪಾವಳಿ

ತಮಸೋಮಾ ಜ್ಯೋತಿರ್ಗಮಯ ಎಂಬ ಮಾತಿನಂತೆ,ಕತ್ತಲಿನಿಂದ ಬೆಳಕಿನೆಡೆಗೆ ನಡೆಯುವ ಆಶಯದಿಂದ, ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ.ಬೆಳಕು ಹೇಗೆ ಕತ್ತಲೆಯನ್ನು ಹೋಗಲಾಡಿಸುತ್ತದೆಯೋ,ಹಾಗೆಯೇ ವಿದ್ಯೆ ಅಥವಾ ಜ್ಞಾನವು,ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸುತ್ತದೆ.
ಹಣತೆಗಳನ್ನು ಹಚ್ಚಿ,ಪಟಾಕಿಗಳನ್ನು ಸಿಡಿಸಿ, ಹೊಸ ಬಟ್ಟೆಬರೆಗಳನ್ನು ಧರಿಸಿ,ಸಿಹಿಯನ್ನು ಹಂಚುತ್ತಾ,ಪ್ರತಿವರ್ಷವೂ ದೀಪಾವಳಿಯನ್ನು ಆಚರಿಸಲವಾಗುತ್ತದೆ.ಬೆಳಕಿನ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸೋಣ




Wednesday, December 17, 2014

ಸಂತಾಪ


ಸಂತಾಪ

ಪಾಕಿಸ್ತಾನದ ಪೇಶಾವರದ ಶಾಲೆಯಲ್ಲಿ ಹತ್ಯೆಗೀಡಾದ 140 ಮಕ್ಕಳ ಹಾಗೂ ಶಿಕ್ಷಕಿಯ ಆತ್ಮಕ್ಕೆ ಭಗವಂತನು ಚಿರ ಶಾಂತಿಯನ್ನು ಹಾಗೂ ಅವರ ಕುಟುಂಬಕ್ಕೆ ದು:ಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು,ಇಂದು ನಡೆದ ಶಾಲಾ ಎಸೆಂಬ್ಲಿಯಲ್ಲಿ ಎಲ್ಲಾ ಮಕ್ಕಳು ಹಾಗೂ ಶಿಕ್ಷಕರಿಂದ 2ನಿಮಿಷಗಳ ಕಾಲ ಮೌನ ಪ್ರಾರ್ಥನೆ ಮಾಡಲಾಯಿತು.

ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನ


ಡಿಸೆಂಬರ್ 14 ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನ

ನಮ್ಮ ಶಕ್ತಿಯನ್ನು ಹೇಗೆ ಕ್ರೋಢೀಕರಿಸಿ,ಸಮಾಜದ ಮತ್ತು ನಾಡಿನಅಭಿವೃದ್ಧಿಗೆ ಬಳಸ ಬಹುದೆಂದು ನೆನಪಿಸುವ,ಪ್ರಕೃತಿಯಿಂದ ಲಭಿಸುವ ಶಕ್ತಿಯನ್ನು ಸಮರ್ಪಕವಾಗಿ ಮಿತವಾಗಿ ಬಳಸಲು ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತಿದೆ.
ಶಕ್ತಿಯನ್ನು ಉತ್ಪಾದಿಸಲು ಸಾಧ್ಯವಿಲ್ಲ,ನಾಶಪಡಿಸಲೂ ಸಾಧ್ಯವಿಲ್ಲ.ಅದನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾಯಿಸಬಹುದಷ್ಟೆ.ನಮ್ಮಲ್ಲಿರುವ ಸಂಪನ್ಮೂಲವನ್ನು ಸಕಾರಾತ್ಮಕವಾಗಿ ಬಳಸಿಕೊಂಡರೆ ನಮ್ಮ ಶಕ್ತಿ ಹೆಚ್ಚಾಗುತ್ತದೆ.

ಡಿಸೆಂಬರ್ 06 ಆಲ್ಫ್ರೆಡ್ ನೊಬೆಲ್ ಸಂಸ್ಮರಣಾ ದಿನ


ಡಿಸೆಂಬರ್ 06 ಆಲ್ಫ್ರೆಡ್ ನೊಬೆಲ್ ಸಂಸ್ಮರಣಾ ದಿನ

ತನ್ನ ಹೆಸರಿನಲ್ಲಿ ಬಹುಮಾನ ಗಳನ್ನು ಕೊಡುವುದಕ್ಕಾಗಿ ತಾನು ಗಳಿಸಿದ ಸಂಪತ್ತನ್ನೆಲ್ಲಾ  ಮೀಸಲಿಟ್ಟ ಸ್ವೀಡನ್ ದೇಶದ ವಿಜ್ಞಾನಿ ಆಲ್ ಫ್ರೆಡ್  ನೊಬೆಲ್.ವರ್ಷಂಪ್ರತಿ ವೈದ್ಯ ಶಾಸ್ತ್ರ,ರಸಾಯನ ಶಾಸ್ತ್ರ,ಭೌತ ಶಾಸ್ತ್ರ,ಸಾಹಿತ್ಯ,ಜಾಗತಿಕ ಶಾಂತಿ ಮತ್ತು ಅರ್ಥ ಶಾಸ್ತ್ರಕ್ಕಾಗಿ ಉತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ನೋಬೆಲ್ ಬಹುಮಾನ ನೀಡಲಾಗುತ್ತಿದೆ.
ಸಾಹಿತ್ಯಕ್ಕಾಗಿ ಭಾರತದಲ್ಲಿ ರವೀಂದ್ರ ನಾಥ ಟಾಗೋರರಿಗೆ, 1913ರಲ್ಲಿ ಪ್ರಪ್ರಥಮವಾಗಿ ನೋಬೆಲ್ ಪ್ರಶಸ್ತಿ ಲಭಿಸಿತು.ಸಿ.ವಿ.ರಾಮನ್,ಹರ್ ಗೋವಿಂದ ಖೊರಾನಾ,ಮದರ್ ತೆರೆಸಾ,ಸುಬ್ರ್ಹಮಣ್ಯ ಚಂದ್ರ ಶೇಖರ್ ನೊಬೆಲ್ ಪ್ರಶಸ್ತಿ ಪಡೆದ ಇತರ ಭಾರತೀಯರು.1901 ರಿಂದ ನೊಬೆಲ್ ಪ್ರಶಸ್ತಿ ಕೊಡಲು ಆರಂಭವಾಯಿತು.
ಆಲ್ ಫ್ರೆಡ್  ನೊಬೆಲ್ 1833ರ ಅಕ್ಟೋಬರ್ 21 ರಂದು ಸ್ವೀಡನ್ ದೇಶದ ಸ್ಟಾಕ್ ಹೋಮ್ ನಲ್ಲಿ ಇಮಾನ್ಯುವೆಲ್ ನೊಬೆಲ್ ಗೆ ಮಗನಾಗಿ ಜನಿಸಿದರು. ಮನೆಯೇ ಮೊದಲ ಪಾಠ ಶಾಲೆ,ತಂದೆಯೇ ಮೊದಲ ಗುರು.ತನ್ನ ತಂದೆಯ ಪ್ರಯೋಗ ಶಾಲೆಯಲ್ಲಿಯೇ ನೊಬೆಲ್ ಮೊದಲು ಕೆಲಸ ಮಾಡಿದುದು.16ನೇ ವಯಸ್ಸಿಗೆ ಹಲವು ಭಾಷೆಗಳನ್ನು ಕಲಿತುದಲ್ಲದೆ ರಸಾಯನ ಶಾಸ್ತ್ರ ವಿದ್ವಾಂಸರೆನಿಸಿಕೊಂಡರು.1850ರಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಪ್ಯಾರಿಸ್ ಗೆ ತೆರಳಿದರು.ನಂತರ ಅಮೇರಿಕಾದಲ್ಲಿ ಅಧ್ಯಯನ ಮಾಡಿ ತಂದೆಯ ಪ್ರಯೋಗ ಶಾಲೆಗೆ ಹಿಂತಿರುಗಿದರು.1859ರಲ್ಲಿ ತಂದೆಯ ಕಾರ್ಖಾನೆ ದಿವಾಳಿಯಾಗಿ,ಹೊಲೆನ್ ಬರ್ಗಿನಲ್ಲಿ ಮತ್ತೊಂದು ಕಾರ್ಖಾನೆ ಶುರುಮಾಡಿದರು.ನೈಟ್ರೋ ಗ್ಲಿಸರಿನ್ ಉತ್ಪಾದನೆ ಆರಂಭಿಸಿ ಸಿಡಿಮದ್ದುಗಳನ್ನು ತಯಾರಿಸಿದರು.ಕಾರ್ಖಾನೆ ಬೆಂಕಿಗೆ ಆಹುತಿಯಾಗಿ ತಮ್ಮ ತೀರಿಹೋದರು.ತಂದೆಗೂ ಪಾರ್ಶ್ವ ವಾಯು ಬಡಿಯಿತು.ದಿಕ್ಕೆಟ್ಟ ನೊಬೆಲ್ ಗೆ ಆಸರೆಯಾದುದು ನಾರ್ವೆ ಹಾಗೂ ಜರ್ಮನಿ.ಅಲ್ಲಿಯೂ ನೈಟ್ಟೋ ಗ್ಲಿಸರಿನ್ ಅಪಾಯಕಾರಿ ವಸ್ತುವಾಗಿ ಪರಿಣಮಿಸಿದಾಗ ಸರಕಾರ ಅದನ್ನು ನಿಷೇಧಿಸಿತು.1886ರಲ್ಲಿ ನೈಟ್ರೋ ಗ್ಲಿಸರಿನ್ ನನ್ನು ಸುರಕ್ಷಿತವಾಗಿ ಸಂರಕ್ಷಿಸುವ ವಿಧಾನವನ್ನು ಕಂಡುಹಿಡಿದರು.ಇದನ್ನು ಘನ ರೂಪಕ್ಕೂ ಬದಲಾಯಿಸಿದರು.ಇದನ್ನು ಡೈನಮೈಟ್ ಎಂದು ಕರೆದರು.ಇದರ ಪೇಟೆಂಟ್ ಪಡೆದು ನೊಬೆಲ್ ಶ್ರೀಮಂತರಾದರು.1887 ರಲ್ಲಿ ಹೊಗೆ ರಹಿತ ನೈಟ್ರೋ ಗ್ಲಿಸರಿನ್ ಪುಡಿ ಕಂಡು ಹಿಡಿದು ವಿವಿಧ ದೇಶಗಳಿಗೆ ಸರಬರಾಜಾಯಿತು.ಹೀಗೆ ಅನೇಕ ಪೇಟೆಂಟ್ಗಳನ್ನು ಪಡೆದು ಆಗರ್ಭ ಶ್ರೀಮಂತರಾದರು.1898 ರಲ್ಲಿ ತೀರಿಕೊಂಡಾಗ ಅವರಲ್ಲಿ ಉಳಿದಿತ್ತು.ಈ ಮೊತ್ತದ ಬಡ್ಡಿಯಂದ.ವರ್ಷಂಪ್ರತಿ ಆಲ್ಫ್ರೆಡ್ ನೊಬೆಲ್ ಸಂಸ್ಮರಣಾರ್ಥ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ.

Vallabha Bai Patel


ಡಿಸೆಂಬರ್ 15, ಸರ್ದಾರ್ ವಲ್ಲಭಬಾಯ್ ಪಟೇಲರ ಸಂಸ್ಮರಣಾ ದಿನ
1875-1950
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕ,ಗುಜರಾತ್ ಮೂಲ
ಭಾರತೀಯ ಆಡಳಿತ ವ್ಯವಸ್ಥೆಗೆ ರೂಪ ಕೊಟ್ಟವರು,ಉಕ್ಕಿನ ಮನುಷ್ಯನೆಂದೇ ಖ್ಯಾತಿ
ಭಾರತದ ಪ್ರಥಮ ಉಪ ಪ್ರಧಾನಿ
ಭಾರತ ರತ್ನ ಪುರಸ್ಕೃತರು


ಕ್ಕಿನ ಮನುಷ್ಯ ಎಂದೇ ಕರೆಯಲ್ಪಟ್ಟ  ಸರ್ದಾರ್ ವಲ್ಲಭಬಾಯ್ ಪಟೇಲ್ 1875ರ ಅಕ್ಟೋಬರ್ 31ರಲ್ಲಿ ಗುಜರಾತಿನ ನಾಡಿಮೇಡ್ ಎಂಬ ಗ್ರಾಮದಲ್ಲಿ ಜನಿಸಿದರು.
ವಲ್ಲಭಬಾಯ್ ಪಟೇಲರು ಬಾಲ್ಯದಿಂದಲೂ ಧೈರ್ಯ ಮತ್ತು ಸಂಘಟನಾ ಚಾತುರ್ಯಗಳನ್ನು ಹೊಂದಿದ್ದರು.ಅಹಮ್ಮದಾಬಾದಿನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ ಇವರು ಬಹು ಬಹೇಗ ಜನಪ್ರಿಯರಾದರು.1917ರಲ್ಲಿ ಅಹಮ್ಮದಾಬಾದಿನ ಸ್ಯಾನಿಟೇಶನ್ ಕಮಿಷನರ್ ಆಗಿ ಆಯ್ಕೆಯಾದರು. ಗಾಂಧೀಜಿಯವರ  ಚಂಪಾರಣ್ಯ ಸತ್ಯಾಗ್ರ ಹ  ದಿಂದ  ಪ್ರಭಾವಿತರಾಗಿದ್ದ ಪಟೇಲ್ 1918ರಲ್ಲಿ ಖೇಡಾ ಪ್ರಾಂತದ ರೈತರನ್ನು ಬರಗಾಲದಲ್ಲೂ ಬ್ರಿಟಿಷರಿಗೆ ಅಧಿಕ ತೆರಿಗೆ ಕಟ್ಟದಂತಿರಲು ಗಾಂಧೀಜಿಯವರೇ ಸೂಚಿಸಿದರು.ಪಟೇಲರಿಗೆ ಇದರ ಜವಾಬ್ದಾರಿಯನ್ನು ವಹಿಸಿದರು. ರೈತರಿಗೆ ನ್ಯಾಯ ಒದಗಿಸಿದರು.1930ರಲ್ಲಿ ಅಸಹಕಾರ ಆಂದೋಲನದಲ್ಲಿ ಭಾಗವಹಿಸಿ ಬಂಧಿತರಾದರು.1931ರ ಕರಾಚಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾದರು. ಗಾಂಧೀಜಿಯವರೊಂದಿಗೆ ಸ್ವಾತಂತ್ರ್ಯಹೋರಾಟದಲ್ಲಿ ಸಕ್ರೀಯವಾಗಿ ಪಾಲ್ಗೊಂಡರು.
ಸ್ವತಂತ್ರ ಭಾರತದ ಗೃಹ ಸಚಿವರಾಗಿ ಚಿಕ್ಕಚಿಕ್ಕ ಸಾಮ್ರಾಜ್ಯಗಳನ್ನು,ಒಂದೇ ಛತ್ರದಡಿಗೆ ತಂದರು.ಇದರಿಂದಾಗಿ ಅವರಿಗೆ ಉಕ್ಕಿನ ಮನುಷ್ಯ ಎಂಬ ಬಿರುದು ಬಂತು.
ವಲ್ಲಭಬಾಯ್ ಪಟೇಲರು 1950ರ ಡಿಸೆಂಬರ್ 15 ರಂದು ಅಸ್ತಂಗತರಾದರು.1991ರಲ್ಲಿ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು.