NEWS FLASH

/home/student/Desktop/Flash.gif ನಮ್ಮ ಶಾಲೆಯ ನೂತನ ಎರಡು ಬ್ಲಾಗುಗಳು ಶುಭಾರಂಭಗೊಂಡಿವೆ="https://www.11264ssaupschevar.blogspot.com">&www.chevarschool.blogspot.com.........OUR TWO NEW BLOGS LAUNCHED.VISIT US..

VISIT OUR BLOG

ನಮ್ಮ ಇನ್ನೊಂದು ಬ್ಲಾಗನ್ನು ವೀಕ್ಷಿಸಿ.....www.11264ssaupschevar.blogspot.in............

Monday, September 1, 2014


ಗಣಿತ ಸೆಮಿನಾರ್-2014
ಶಾಲಾ ಮಟ್ಟದ ಗಣಿತ ಸೆಮಿನಾರ್ 25-08-2014 ರಂದು ಗಣಿತ ಕ್ಲಬ್ ನ ಆಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ಜರಗಿತು.ಉದ್ಘಾಟನೆಯನ್ನು,ಅಧ್ಯಾಪಕ ರವಿಕುಮಾರ್ ನೆರವೇರಿಸುತ್ತಾ,ಗಣಿತದ ಕುರಿತು ಆಳವಾದ ಜ್ಞಾನ ಪಡೆಯಲು,ಸೆಮಿನಾರ್ ಸಹಕಾರಿ,ಇದರಿಂದಾಗಿ ಜ್ಞಾನವು ಹೆಚ್ಚಾಗುವುದರೊಂದಿಗೆ, ಗಣಿತದಲ್ಲಿ ಆಸಕ್ತಿ ಬೆಳೆಯುವುದೆಂದು,ಅಭಿಪ್ರಾಯ ಪಟ್ಟರು.
ಯು.ಪಿ ವಿಭಾಗದ ವಿದ್ಯಾರ್ಥಿಗಳು,ಸೆಮಿನಾರನ್ನು ಮಂಡಿಸಿದರು.ಬಿಂದು ಸ್ವಾಗತಿಸಿದಳು.ಆದರ್ಷ ವಂದಿಸಿದನು.ಕ್ಷಿತೀಶ ಸಿ.ಯಸ್ ಪ್ರಥಮ,ಅಕ್ಷತ.ಕೆ ಹಾಗೂ ವಿದ್ಯಾಶ್ರೀ ದ್ವಿತೀಯ ಸ್ಥಾನ ಪಡೆದರು.

National Sports Day


ರಾಷ್ಟ್ರೀಯ ಕ್ರೀಡಾದಿನ

ಭಾ
ರತ ಕಂಡ ಅಪರೂಪದ ಹಾಕಿ ಆಟಗಾರ ಧ್ಯಾನ್ ಚಂದ್ ಅವರ ಹುಟ್ಟಿದ ದಿನವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸಲಾಗುತ್ತಿದೆ. ಧ್ಯಾನ್ ಚಂದ್ ರು 1905 ರ ಆಗಸ್ಟ್ 29ರಂದು ಜನಿಸಿದರು.ಇವರಿದ್ದ ಹಾಕಿ ತಂಡ,ಸತತವಾಗಿ ಮೂರು ಬಾರಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಭಾರತದ ಹಿರಿಮೆಯನ್ನು ಹೆಚ್ಚಿಸಿತು. ಧ್ಯಾನ್ ಚಂದ್ ಅವರಿಗೆ,ಸ್ವಾತಂತ್ರ್ಯಾನಂತರ ಪದ್ಮ ಭೂಷಣ ಪ್ರಶಸ್ತಿ ನೀಡಲಾಯಿತು.ಇವರು 50ಮತ್ತು60ರ ದಶಕದಲ್ಲಿ,ಭಾರತ ತಂಡಕ್ಕೆ ತ ರಬೇತಿ ನೀಡಿದ್ದರು.1979ರ ಡಿಸೆಂಬರ್ 5 ರಂದು ಅಸ್ತಂಗತರಾದರು.
ರಾಷ್ಟ್ರೀಯ ಕ್ರೀಡಾದಿನದಂದು ಶ್ರೇಷ್ಠ ಆಟಗಾರರಿಗಿರುವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ,ಅರ್ಜುನ ಪ್ರಶಸ್ತಿ,ಏಕಲವ್ಯ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ನಾವು ಕೂಡ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ ದೇಶವನ್ನು ಕ್ರೀಡಾ ಕ್ಷೇತ್ರದಲ್ಲಿ ಮಿಂಚಿಸೋಣ

Wednesday, August 20, 2014

ಚಂದ್ರಯಾನ



ಚೇವಾರಿನಲ್ಲಿ ಧರೆಗಿಳಿದ ಚಂದ್ರ ಮಾನವ

ಜುಲೈ21ರ ಚಾಂದ್ರ ದಿನವನ್ನು ನಮ್ಮಶಾಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.ಶಾಲಾ ಎಸೆಂಬ್ಲಿಯಲ್ಲಿ ದಿನದ ಮಹತ್ವವನ್ನು ವಿವರಿಸಲಾಯಿತು.ತದ ನಂತರ ಚಂದ್ರಯಾನದ ವಿವಿಧ ಹಂತಗಳ ವೀಡಿಯೋ ಪ್ರದರ್ಶನ ಏರ್ಪಡಿಸಲಾಯಿತು.ಬಾಹ್ಯಾಕಾಶಕ್ಕೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆ ನಡೆಸಲ್ಪಟ್ಟಿತು

.

ಸಂಜೆ ನಡೆದ ಸಭಾಕಾರ್ಯಕ್ರಮವನ್ನುಶಾಲಾ ಮುಖ್ಯ ಶಿಕ್ಷಕರಾದ ಶ್ಯಾಮ ಭಟ್ ಉದ್ಘಾಟಿಸಿ, ಮಕ್ಕಳು ಎಳವೆಯಲ್ಲಿಯೇ ಸಂಶೋಧನಾತ್ಮಕ ಗುಣವನ್ನು ಬೆಳಸಬೇಕೆಂದು ಕರೆಯಿತ್ತರು.ಸಭಾಧ್ಯಕ್ಷರಾಗಿದ್ದ ಹಿರಿಯ ಅಧ್ಯಾಪಕ,ಶಂಕರನಾರಾಯಣ ಭಟ್ ಮಾತನಾಡಿ,ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ಮನುಷ್ಯ ಎಷ್ಟು ಮುಂದುವರಿದಿದ್ದಾನೆಂಬುದು  ಇದರಿಂದ ಸಾಬೀತಾಗಿದೆಯೆಂದು ಅಭಿಪ್ರಾಯಪಟ್ಟರು.

ಸಭೆಗೆ ಆಗಮಿಸಿದ ವಿಶೇಷ ಉಡುಪುಧಾರಿ ಗಗನಯಾತ್ರಿಯು ಎಲ್ಲರನ್ನೂ ಮಂತ್ರ ಮುಗ್ದರನ್ನಾಗಿಸಿದನು.ಮಕ್ಕಳೆಲ್ಲರೂ ಕುತೂಹಲದಿಂದ ಗಗನ ಯಾನ,ಚಂದ್ರನ ನೆಲ,ವಾತಾವರಣದ ಕುರಿತಾಗಿ ಅನೇಕ ಪ್ರಶ್ನೆಗಳನ್ನು ಕೇಳಿದರು.ಗಗನಯಾತ್ರಿಯು,ಸಾವಕಾಶವಾಗಿ ಉತ್ತರಿಸಿದನು.ತನ್ನಅನುಭವವನ್ನು ಮನಮುಟ್ಟುವಂತೆ ವಿವರಿಸಿದನು.ವಿದ್ಯಾರ್ಥಿಗಳಾದ ಕ್ಷಿತೀಷ,ಅಕ್ಷತ,ಜೈನಬತ್ ಅಸ್ಮೀನಾ,ಆದರ್ಷ,ಚಂದ್ರನ ಕುರಿತತಾದ ಪ್ರಬಂಧಗಳನ್ನು ಮಂಡಿಸಿದರು.ರಸಪ್ರಶ್ನೆ ವಿಜೇತರನ್ನು ಅಭಿನಂದಿಸಲಾಯಿತು.ವಿಜ್ಞಾನ ಕ್ಲ ಬ್ ಕಾರ್ಯದರ್ಶಿ ಅತಿಥಿಗಳನ್ನು ಸ್ವಾಗತಿಸಿದಳು.ಜತೆ ಕಾರ್ಯದರ್ಶಿ ವಂದಿಸಿದನು.



 68ನೇ ಸ್ವಾತಂತ್ರ್ಯೋತ್ಸವ






Sunday, November 10, 2013

ಮಕ್ಕಳ ಕಲರವ


                                                                                                                                                                       ನಮ್ಮ ಶಾಲೆ   ೧೯೨೬ ರಲ್ಲಿ ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯು ಆರಂಭವಾಗಿ,ನಿರಂತರವಾಗಿ ವಿದ್ಯಾರ್ಥಿಗಳಿಗೆ ಜ್ಡಾನಾರ್ಜನೆಯನ್ನು ನೀಡುತ್ತಿದೆ.ಪ್ರಕೃತಿ ರಮಣೀಯ ಪೊಸಡಿಗುಂಪೆಯ ತಪ್ಪಲಿನ  ಚೇವಾರು ಎಂಬ ಪುಟ್ಟ ಹಳ್ಳಿಯಲ್ಲಿ      ಕಂಗೊಳಿಸುತ್ತಿರುವ ನಮ್ಮ    ಶಾಲೆಯು    ಊರಿನ    ಆಸ್ತಿಯಾಗಿದೆ.
ಒಂದನೇ ತರಗತಿಯಿಂದ ಏಳನೇತರಗತಿವರೆಗೆ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

 
ಚೇವಾರಿನಲ್ಲಿ ಧರೆಗಿಳಿದ ಚಂದ್ರ ಮಾನವ
ಜುಲೈ21ರ ಚಾಂದ್ರ ದಿನವನ್ನು ನಮ್ಮಶಾಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.ಶಾಲಾ ಎಸೆಂಬ್ಲಿಯಲ್ಲಿ ದಿನದ ಮಹತ್ವವನ್ನು ವಿವರಿಸಲಾಯಿತು.ತದ ನಂತರ ಚಂದ್ರಯಾನದ ವಿವಿಧ ಹಂತಗಳ ವೀಡಿಯೋ ಪ್ರದರ್ಶನ ಏರ್ಪಡಿಸಲಾಯಿತು.ಬಾಹ್ಯಾಕಾಶಕ್ಕೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆ ನಡೆಸಲ್ಪಟ್ಟಿತು
.
ಸಂಜೆ ನಡೆದ ಸಭಾಕಾರ್ಯಕ್ರಮವನ್ನುಶಾಲಾ ಮುಖ್ಯ ಶಿಕ್ಷಕರಾದ ಶ್ಯಾಮ ಭಟ್ ಉದ್ಘಾಟಿಸಿ, ಮಕ್ಕಳು ಎಳವೆಯಲ್ಲಿಯೇ ಸಂಶೋಧನಾತ್ಮಕ ಗುಣವನ್ನು ಬೆಳಸಬೇಕೆಂದು ಕರೆಯಿತ್ತರು.ಸಭಾಧ್ಯಕ್ಷರಾಗಿದ್ದ ಹಿರಿಯ ಅಧ್ಯಾಪಕ,ಶಂಕರನಾರಾಯಣ ಭಟ್ ಮಾತನಾಡಿ,ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ಮನುಷ್ಯ ಎಷ್ಟು ಮುಂದುವರಿದಿದ್ದಾನೆಂಬುದು ಇದರಿಂದ ಸಾಬೀತಾಗಿದೆಯೆಂದು ಅಭಿಪ್ರಾಯಪಟ್ಟರು.
ಸಭೆಗೆ ಆಗಮಿಸಿದ ವಿಶೇಷ ಉಡುಪುಧಾರಿ ಗಗನಯಾತ್ರಿಯು ಎಲ್ಲರನ್ನೂ ಮಂತ್ರ ಮುಗ್ದರನ್ನಾಗಿಸಿದನು.ಮಕ್ಕಳೆಲ್ಲರೂ ಕುತೂಹಲದಿಂದ ಗಗನ ಯಾನ,ಚಂದ್ರನ ನೆಲ,ವಾತಾವರಣದ ಕುರಿತಾಗಿ ಅನೇಕ ಪ್ರಶ್ನೆಗಳನ್ನು ಕೇಳಿದರು.ಗಗನಯಾತ್ರಿಯು,ಸಾವಕಾಶವಾಗಿ ಉತ್ತರಿಸಿದನು.ತನ್ನಅನುಭವವನ್ನು ಮನಮುಟ್ಟುವಂತೆ ವಿವರಿಸಿದನು.ವಿದ್ಯಾರ್ಥಿಗಳಾದ ಕ್ಷಿತೀಷ,ಅಕ್ಷತ,ಜೈನಬತ್ ಅಸ್ಮೀನಾ,ಆದರ್ಷ,ಚಂದ್ರನ ಕುರಿತತಾದ ಪ್ರಬಂಧಗಳನ್ನು ಮಂಡಿಸಿದರು.ರಸಪ್ರಶ್ನೆ ವಿಜೇತರನ್ನು ಅಭಿನಂದಿಸಲಾಯಿತು.ವಿಜ್ಞಾನ ಕ್ಲ ಬ್ ಕಾರ್ಯದರ್ಶಿ ಅತಿಥಿಗಳನ್ನು ಸ್ವಾಗತಿಸಿದಳು.ಜತೆ ಕಾರ್ಯದರ್ಶಿ ವಂದಿಸಿದನು.















Wednesday, November 6, 2013

Our School

ನಮ್ಮ  ಊ ರಿ ನ ಮೊ ದ ಲ  ಶಾಲೆ ಯಾವುದೆಂದು ನಿಮಗೆ ಗೊತ್ತೇ ? ಅದುವೇ  ಶ್ರೀ ಶಾರದಾ ಹಿರಿಯ  ಪ್ರಾಥಮಿಕ ಶಾಲೆ ಚೇವಾರು. ಬ್ರಿಟಿಷರ ಕಾಲದ ಆಡಳಿತ ದಲ್ಲೇ  ಈ ಶಾಲೆ  ಆರಂಭ ವಾಗಿತ್ತು ,ಎಂದು ಹಿರಿಯರು ಹೇಳುತ್ತಾರೆ