NEWS FLASH

/home/student/Desktop/Flash.gif ನಮ್ಮ ಶಾಲೆಯ ನೂತನ ಎರಡು ಬ್ಲಾಗುಗಳು ಶುಭಾರಂಭಗೊಂಡಿವೆ="https://www.11264ssaupschevar.blogspot.com">&www.chevarschool.blogspot.com.........OUR TWO NEW BLOGS LAUNCHED.VISIT US..

VISIT OUR BLOG

ನಮ್ಮ ಇನ್ನೊಂದು ಬ್ಲಾಗನ್ನು ವೀಕ್ಷಿಸಿ.....www.11264ssaupschevar.blogspot.in............

Wednesday, December 17, 2014

Vallabha Bai Patel


ಡಿಸೆಂಬರ್ 15, ಸರ್ದಾರ್ ವಲ್ಲಭಬಾಯ್ ಪಟೇಲರ ಸಂಸ್ಮರಣಾ ದಿನ
1875-1950
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕ,ಗುಜರಾತ್ ಮೂಲ
ಭಾರತೀಯ ಆಡಳಿತ ವ್ಯವಸ್ಥೆಗೆ ರೂಪ ಕೊಟ್ಟವರು,ಉಕ್ಕಿನ ಮನುಷ್ಯನೆಂದೇ ಖ್ಯಾತಿ
ಭಾರತದ ಪ್ರಥಮ ಉಪ ಪ್ರಧಾನಿ
ಭಾರತ ರತ್ನ ಪುರಸ್ಕೃತರು


ಉ
ಕ್ಕಿನ ಮನುಷ್ಯ ಎಂದೇ ಕರೆಯಲ್ಪಟ್ಟ  ಸರ್ದಾರ್ ವಲ್ಲಭಬಾಯ್ ಪಟೇಲ್ 1875ರ ಅಕ್ಟೋಬರ್ 31ರಲ್ಲಿ ಗುಜರಾತಿನ ನಾಡಿಮೇಡ್ ಎಂಬ ಗ್ರಾಮದಲ್ಲಿ ಜನಿಸಿದರು.
ವಲ್ಲಭಬಾಯ್ ಪಟೇಲರು ಬಾಲ್ಯದಿಂದಲೂ ಧೈರ್ಯ ಮತ್ತು ಸಂಘಟನಾ ಚಾತುರ್ಯಗಳನ್ನು ಹೊಂದಿದ್ದರು.ಅಹಮ್ಮದಾಬಾದಿನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ ಇವರು ಬಹು ಬಹೇಗ ಜನಪ್ರಿಯರಾದರು.1917ರಲ್ಲಿ ಅಹಮ್ಮದಾಬಾದಿನ ಸ್ಯಾನಿಟೇಶನ್ ಕಮಿಷನರ್ ಆಗಿ ಆಯ್ಕೆಯಾದರು. ಗಾಂಧೀಜಿಯವರ  ಚಂಪಾರಣ್ಯ ಸತ್ಯಾಗ್ರ ಹ  ದಿಂದ  ಪ್ರಭಾವಿತರಾಗಿದ್ದ ಪಟೇಲ್ 1918ರಲ್ಲಿ ಖೇಡಾ ಪ್ರಾಂತದ ರೈತರನ್ನು ಬರಗಾಲದಲ್ಲೂ ಬ್ರಿಟಿಷರಿಗೆ ಅಧಿಕ ತೆರಿಗೆ ಕಟ್ಟದಂತಿರಲು ಗಾಂಧೀಜಿಯವರೇ ಸೂಚಿಸಿದರು.ಪಟೇಲರಿಗೆ ಇದರ ಜವಾಬ್ದಾರಿಯನ್ನು ವಹಿಸಿದರು. ರೈತರಿಗೆ ನ್ಯಾಯ ಒದಗಿಸಿದರು.1930ರಲ್ಲಿ ಅಸಹಕಾರ ಆಂದೋಲನದಲ್ಲಿ ಭಾಗವಹಿಸಿ ಬಂಧಿತರಾದರು.1931ರ ಕರಾಚಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾದರು. ಗಾಂಧೀಜಿಯವರೊಂದಿಗೆ ಸ್ವಾತಂತ್ರ್ಯಹೋರಾಟದಲ್ಲಿ ಸಕ್ರೀಯವಾಗಿ ಪಾಲ್ಗೊಂಡರು.
ಸ್ವತಂತ್ರ ಭಾರತದ ಗೃಹ ಸಚಿವರಾಗಿ ಚಿಕ್ಕಚಿಕ್ಕ ಸಾಮ್ರಾಜ್ಯಗಳನ್ನು,ಒಂದೇ ಛತ್ರದಡಿಗೆ ತಂದರು.ಇದರಿಂದಾಗಿ ಅವರಿಗೆ ಉಕ್ಕಿನ ಮನುಷ್ಯ ಎಂಬ ಬಿರುದು ಬಂತು.
ವಲ್ಲಭಬಾಯ್ ಪಟೇಲರು 1950ರ ಡಿಸೆಂಬರ್ 15 ರಂದು ಅಸ್ತಂಗತರಾದರು.1991ರಲ್ಲಿ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು.

Saturday, October 11, 2014



ವಿಶ್ವ ದೃಷ್ಟಿ ದಿನಾಚರಣೆ

ವಿಶ್ವ ದೃಷ್ಟಿ ದಿನಾಚರಣೆಯನ್ನು ಅಕ್ಟೋಬರ್ ತಿಂಗಳ 2ನೇ ಗುರುವಾರದಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
‘ಅಂಧತ್ವತನ ಇನ್ನು ಮುಂದಿಲ್ಲದಂತೆ ತಡೆಗಟ್ಟೋಣ’ಎಂಬ ಘೋಷಣಾ ವಾಕ್ಯದೊಂದಿಗೆ ವಿಶ್ವ ದೃಷ್ಟಿ ದಿನಾಚರಣೆಯನ್ನು ಈ ವರ್ಷ ಆಚರಿಸ ಲಾಗುತ್ತಿದೆ.ಕಣ್ಣು ಎಂಬುದು ಪಂಚೇಂದ್ರಿಯಗಳಲ್ಲಿ ಒಂದು ಅಂಗವಾಗಿದೆ.ಕಣ್ಮ ಲ್ಲದವರಸು ಜೀವಿಸುವುದು ಬಹಳ ಕಷ್ಟದಿಂದ.ಟಿ.ವಿಯನ್ನು ಅತೀ ಹತ್ತಿರದಿಂದ ವೀಕ್ಷಿಸುವುದರಿಂದ,ಪ್ರಖರ ಬೆಳಕನ್ನು ನೇರವಾಗಿ ನೋಡುವುದರಂದ,ಅರೆ ಬೆಳಕಿನಲ್ಲಿ ಓದುವುದರಿಂದ,ಕಣ್ಣಿನ ದೃಷ್ಟಿ ದೋಷ ಉಂಟಾಗುತ್ತದೆ. ವಿಶ್ವದ ಶೇಕಡಾ 80ರಷ್ಟು ಅಂಧತ್ವವನ್ನು ಚಿಕಿತ್ಸೆ ಮೂಲಕ ನಿವಾರಿಸ ಬಹುದು.ಮರಣದ ನಂತರ ನಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಅಂಧರ ಬೀಳನ್ನು ಬೆಳಗಿಸಬಹುದು.


Tuesday, October 7, 2014

ವನ್ಯಜೀವಿ ಸಪ್ತಾಹ


ಅಕ್ಟೋಬರ್ 1 ರಿಂದ 7.ವನ್ಯಜೀವಿ ಸಪ್ತಾಹ

    ಭೂಮಿಯ ಮೇಲೆ ವಿವಿಧ ಪ್ರಭೇದಗಳ ಜೀವರಾಶಿಗಳಿವೆ.ಇವುಗಳಲ್ಲಿ ವನ್ಯ ಜೀವಿಗಳೂ ಸೇರಿವೆ.ಭೂಮಿಯ ಮೇಲೆ ಬದುಕುವ ಹಕ್ಕು ಮನುಷ್ಯರಂತೆಯೇ,ಇತರಜೀವಿಗಳಿಗೂ ಇದೆ.ಕಾಡು ಅನೇಕ ವನ್ಯ ಜೀವಿಗಳ ಆಶ್ರಯತಾಣವಾಗಿದೆ.ಹುಲಿ,ಸಿಂಹ,ಕರಡಿ,ಮಂಗ,ಚಿರತೆ,ಜೀಬ್ರಾ ಮುಂತಾದ ಅನೇಕಜೀವಿಗಳಿಗೆ ಬದುಕಲು ಕಾಡು ಬೇಕು.ಕಾಡು ಪ್ರಾಣಿಗಳ ರಕ್ಷಣೆಯ ನಿಟ್ಟಿನಲ್ಲಿ ಅಕ್ಟೋಬರ್ 1ರಿಂದ 7ರ ತನಕ ವನ್ಯ ಜೀವಿ ಸಪ್ತಾಹವನ್ನು ಆಚರಿಸಲಾಗುತ್ತಿದೆ.1977ರಲ್ಲಿಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಬಂದ ನಂತರ ವನ್ಯ ಜೀವಿಗಳು ಅರಣ್ಯ ಸಂಪತ್ತು ಉಳಿಯಲು ಕಾರಣವಾಯಿತು.ಆಹಾರ ಸರಪಳಿಯಲ್ಲಿ ಎಲ್ಲಾ ಜೀವಿಗಳು ಒಳಗೊಂಡಿವೆ.
ವನ್ಯ ಜೀವಿಗಳ ಅಳಿವಿಗೆ,ಮನುಷ್ಯನು ಕಾರಣನಾಗುತ್ತಿರುವುದು ಬೇಸರದ ಸಂಗತಿಯಾಗಿದೆ.ಗಾಂಧೀಜಿಯವರ ನೆನಪಿನಲ್ಲಿ ಆರಂಭವಾದ ಈ ವನ್ಯ ಜೀವಿ ಸಂರಕ್ಷಣಾ ಸಪ್ತಾಹವು ಫಲಪ್ರದವಾಗಲಿ,ವನ್ಯ ಜೀವಿಗಳು ಇನ್ನಷ್ಟು ಹೆಚ್ಚಾಗಲಿ ಎಂಬುದೇ ನಮ್ಮೆಲ್ಲರ ಆಶಯ.

Gandhi Jayanthi


ಚೇವಾರು:ಗಾಂಧೀ ಜಯಂತಿ ಆಚರಣೆ

ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧೀ ಜಯಂತಿಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಶಾಲಾ ಎಸೆಂಬ್ಲಿಯಲ್ಲಿ,ಸ್ವಚ್ಛತಾ ಅಭಿಯಾನದ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಪೈವಳಿಕೆ ಪಂಚಾಯತು ಸದಸ್ಯೆ  ಸುಬೈದಾ ಟೀಚರ್  ನೆರವೇರಿಸಿ, ಗಾಂಧೀಜಿಯವರು ಜೀವನದಲ್ಲಿ ಪಾಲಿಸಿದ ಸತ್ಯ,ಶಾಂತಿ,ಅಹಿಂಸೆ,ಪ್ರೇಮ,ಸರಳತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆಯಿತ್ತರು.ಪಿ.ಟಿ.ಎ. ಅಧ್ಯಕ್ಷ ಪರಮೇಶ್ವರ ಪಾವಲುಕೋಡಿ ಅಧ್ಯಕ್ಷತೆ ವಹಿಸಿದರು.ಮುಖ್ಯ ಅತಿಥಿಗಳಾಗಿ ,ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘದ ಅಧಿಕಾರಿ ಭರತ್ ಕುಂದಾಪುರ ಮತ್ತು ಮಾತೃ ರಕ್ಷಕ ಸಂಘದ ಅಧ್ಯಕ್ಷೆ ಇಂದಿರಾ ಶುಭಾಶಂಸನೆಗೈದರು. ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಸ್ವಾಗತಿಸಿದರು. ಶಿಕ್ಷಕಿ ರಾಜೇಶ್ವರಿ ವಂದಿಸಿದರು. ಶಿಕ್ಷಕ ವಿನೋದ್ ಚೇವಾರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಗಾಂಧೀಜಿಯವರ ಭಾವ ಚಿತ್ರಕ್ಕೆ,ವಿದ್ಯಾರ್ಥಿಗಳು,ಶಿಕ್ಷಕರು,ರಕ್ಷಕರು ಪುಷ್ಪಾರ್ಚನೆಗೈದು ಗೌರವ ಸಲ್ಲಿಸಿದರು.ಪರಿಸರ ಶುಚೀಕರಣ ಮತ್ತು ಗಾಂಧೀಜಿ ಕುರಿತಾದ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಯಿತು.

Wednesday, September 17, 2014

Ozone Day Celebration


ಚೇವಾರಿನಲ್ಲಿ ಓಝೋನ್ ದಿನಾಚರಣೆ






ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಓಝೋನ್ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಹಿರಿಯ ಅಧ್ಯಾಪಕರಾದ ಶ್ರೀ ಶಂಕರ ನಾರಾಯಣ ಭಟ್,ವಾತಾವರಣವನ್ನು ರಕ್ಷಿಸಲು ನಾವೆಲ್ಲರೂ ಶ್ರಮಿಸಬೇಕೆಂದು ಕರೆಯಿತ್ತರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಧ್ಯಾಪಕ ರವಿಕುಮಾರ್,ವಾತಾವರಣದ ವಿವಿಧ ಪದರಗಳ ಚಿತ್ರವನ್ನು ಪ್ರದರ್ಶಿಸಿ,ವಿವರಿಸಿದರು. ಓಝೋನ್ ಅಂದರೆ ಏನು,ಅದರ ಪ್ರಾಧಾನ್ಯತೆ,ಅದರ ಕ್ಷಯಿಸುವಿಕೆ ಕುರಿತು ಚಿತ್ರ ಸಹಿತ ವಿವರಿಸಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಧ್ಯಾಪಕ ಪ್ರಸಾದ್ ರೈ,ಮನುಷ್ಯನ ಅನುಕೂಲತೆಗಾಗಿ,ಪರಿಸರ, ವಾತಾವರಣವನ್ನು,ಹಾಳು ಮಾಡುತ್ತಿರುವುದು ವಿಷಾದನೀಯ,ಇದನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದರು. . ಓಝೋನ್ ಹಾಗೂ ಬಹ್ಯಾಕಾಶ ಕುರಿತಾದ ರಸಪ್ರಶ್ನೆ ಸ್ಪರ್ಧೆ, ಏರ್ಪಡಿಸಲಾಯಿತು
ವಿದ್ಯಾರ್ಥಿಗಳು ಪ್ರಬಂಧಗಳನ್ನು ಮಂಡಿಸಿದರು.ಜೈನಬತ್ ಅಸ್ಮೀನಾ ಕಾರ್ಯಕ್ರಮ ನಿರೂಪಿಸಿದರು.ಹಂಸಾನಾ ಸ್ವಾಗತಿಸಿದರು.ವಿದ್ಯಾಶ್ರೀ ವಂದಿಸಿದರು.