NEWS FLASH

/home/student/Desktop/Flash.gif ನಮ್ಮ ಶಾಲೆಯ ನೂತನ ಎರಡು ಬ್ಲಾಗುಗಳು ಶುಭಾರಂಭಗೊಂಡಿವೆ="https://www.11264ssaupschevar.blogspot.com">&www.chevarschool.blogspot.com.........OUR TWO NEW BLOGS LAUNCHED.VISIT US..

VISIT OUR BLOG

ನಮ್ಮ ಇನ್ನೊಂದು ಬ್ಲಾಗನ್ನು ವೀಕ್ಷಿಸಿ.....www.11264ssaupschevar.blogspot.in............

Tuesday, October 7, 2014

Gandhi Jayanthi


ಚೇವಾರು:ಗಾಂಧೀ ಜಯಂತಿ ಆಚರಣೆ

ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧೀ ಜಯಂತಿಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಶಾಲಾ ಎಸೆಂಬ್ಲಿಯಲ್ಲಿ,ಸ್ವಚ್ಛತಾ ಅಭಿಯಾನದ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಪೈವಳಿಕೆ ಪಂಚಾಯತು ಸದಸ್ಯೆ  ಸುಬೈದಾ ಟೀಚರ್  ನೆರವೇರಿಸಿ, ಗಾಂಧೀಜಿಯವರು ಜೀವನದಲ್ಲಿ ಪಾಲಿಸಿದ ಸತ್ಯ,ಶಾಂತಿ,ಅಹಿಂಸೆ,ಪ್ರೇಮ,ಸರಳತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆಯಿತ್ತರು.ಪಿ.ಟಿ.ಎ. ಅಧ್ಯಕ್ಷ ಪರಮೇಶ್ವರ ಪಾವಲುಕೋಡಿ ಅಧ್ಯಕ್ಷತೆ ವಹಿಸಿದರು.ಮುಖ್ಯ ಅತಿಥಿಗಳಾಗಿ ,ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘದ ಅಧಿಕಾರಿ ಭರತ್ ಕುಂದಾಪುರ ಮತ್ತು ಮಾತೃ ರಕ್ಷಕ ಸಂಘದ ಅಧ್ಯಕ್ಷೆ ಇಂದಿರಾ ಶುಭಾಶಂಸನೆಗೈದರು. ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಸ್ವಾಗತಿಸಿದರು. ಶಿಕ್ಷಕಿ ರಾಜೇಶ್ವರಿ ವಂದಿಸಿದರು. ಶಿಕ್ಷಕ ವಿನೋದ್ ಚೇವಾರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಗಾಂಧೀಜಿಯವರ ಭಾವ ಚಿತ್ರಕ್ಕೆ,ವಿದ್ಯಾರ್ಥಿಗಳು,ಶಿಕ್ಷಕರು,ರಕ್ಷಕರು ಪುಷ್ಪಾರ್ಚನೆಗೈದು ಗೌರವ ಸಲ್ಲಿಸಿದರು.ಪರಿಸರ ಶುಚೀಕರಣ ಮತ್ತು ಗಾಂಧೀಜಿ ಕುರಿತಾದ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಯಿತು.

Wednesday, September 17, 2014

Ozone Day Celebration


ಚೇವಾರಿನಲ್ಲಿ ಓಝೋನ್ ದಿನಾಚರಣೆ






ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಓಝೋನ್ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಹಿರಿಯ ಅಧ್ಯಾಪಕರಾದ ಶ್ರೀ ಶಂಕರ ನಾರಾಯಣ ಭಟ್,ವಾತಾವರಣವನ್ನು ರಕ್ಷಿಸಲು ನಾವೆಲ್ಲರೂ ಶ್ರಮಿಸಬೇಕೆಂದು ಕರೆಯಿತ್ತರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಧ್ಯಾಪಕ ರವಿಕುಮಾರ್,ವಾತಾವರಣದ ವಿವಿಧ ಪದರಗಳ ಚಿತ್ರವನ್ನು ಪ್ರದರ್ಶಿಸಿ,ವಿವರಿಸಿದರು. ಓಝೋನ್ ಅಂದರೆ ಏನು,ಅದರ ಪ್ರಾಧಾನ್ಯತೆ,ಅದರ ಕ್ಷಯಿಸುವಿಕೆ ಕುರಿತು ಚಿತ್ರ ಸಹಿತ ವಿವರಿಸಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಧ್ಯಾಪಕ ಪ್ರಸಾದ್ ರೈ,ಮನುಷ್ಯನ ಅನುಕೂಲತೆಗಾಗಿ,ಪರಿಸರ, ವಾತಾವರಣವನ್ನು,ಹಾಳು ಮಾಡುತ್ತಿರುವುದು ವಿಷಾದನೀಯ,ಇದನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದರು. . ಓಝೋನ್ ಹಾಗೂ ಬಹ್ಯಾಕಾಶ ಕುರಿತಾದ ರಸಪ್ರಶ್ನೆ ಸ್ಪರ್ಧೆ, ಏರ್ಪಡಿಸಲಾಯಿತು
ವಿದ್ಯಾರ್ಥಿಗಳು ಪ್ರಬಂಧಗಳನ್ನು ಮಂಡಿಸಿದರು.ಜೈನಬತ್ ಅಸ್ಮೀನಾ ಕಾರ್ಯಕ್ರಮ ನಿರೂಪಿಸಿದರು.ಹಂಸಾನಾ ಸ್ವಾಗತಿಸಿದರು.ವಿದ್ಯಾಶ್ರೀ ವಂದಿಸಿದರು.

Monday, September 15, 2014

OZONE DAY


ಸೆಪ್ಟೆಂಬರ್-16 ವಿಶ್ವ ಓಝೋನ್ ದಿನ

ಮ್ಮ ಭೂಮಿಯು, ಜೀವಿಗಳಿರುವ ಏಕೈಕ ಸುಂದರ ಗ್ರಹವಾಗಿದೆ.ಸೂರ್ಯನನ್ನುಕೇಂದ್ರವಾಗಿರಿಸಿಕೊಂಡು ಇತರ ಗ್ರಹಗಳೊಂದಿಗೆ ಸೌರವ್ಯೂಹದಲ್ಲಿ ಸುತ್ತುಬರುತ್ತಿದೆ. ಭೂಮಿಗೆ ಒಂದು ವ್ಯವಸ್ಥಿತವಾದ ವಾತಾವರಣವಿದೆ.ಈ ವಾತಾವರಣವು . ಭೂಮಿಯ ಮೇಲಿರುವ ಜೀವಜಾಲಗಳನ್ನು ರಕ್ಷಿಸಿ ಪೋಷಿಸುತ್ತದೆ. ಈ ವಾತಾವರಣದಲ್ಲಿ ಓಝೋನ್ ಎಂಬ ವಿಶಿಷ್ಟವಾದ ಒಂದು ಅನಿಲ ಪದರವಿದೆ.ಈ ಓಝೋನ್ ಪದರವು ಸೂರ್ಯನಿಂದ ಬರುವ ನೇರಳಾತೀತಕಿರಣಗಳಲ್ಲಿರುವ ಹಾನಿಕಾರಕ ವಿಕಿರಣಗಳನ್ನುತಡೆದು ಭೂಮಿಗೆ ಬೀಳದಂತೆ ಮಾಡುತ್ತದೆ. ಈ ಹಾನಿಕಾರಕ ವಿಕಿರಣಗಳು, ನಿರಂತರವಾಗಿ ಮನುಷ್ಯನ ಮೈಮೇಲೆ ಬಿದ್ದಲ್ಲಿ, ಚರ್ಮದ ಕ್ಯಾನ್ಸರ್ ನಂತಹ ರೋಗಗಳು ಉಂಟಾಗಬಹುದು.ಇದು ಜೀವಜಾಲಗಳ ನಾಶಕ್ಕೂ ನಾಂದಿಯಾಗಬಹುದು.                                           ಇಂದು ಮನುಷ್ಯನ ಲೋಭದಿಂದಾಗಿ ಈ ಓಝೋನ್ ಪದರವು ನಾಶವಾಗುತ್ತಿದೆ.ರೆಫ್ರಿಜರೇಟರ್,ಕೃತಕ ಸುಗಂಧದ್ರವ್ಯಗಳು ಏ.ಸಿ,,ಶೇವಿಂಗ್ ಕ್ರೀಮ್ ಮುಂತಾದವುಗಳ ಉಪಯೋಗ ದಿಂದ ಉಂಟಾಗುವ ಕ್ಲೋರೋಫ್ಲೋರೋಕಾರ್ಬನ್ ಓಝೋನ್ ಪದರವನ್ನು ತೆಳ್ಳಗಾಗಿಸುತ್ತದೆ.

Engineer's Day


ಸೆಪ್ಟೆಂಬರ್-15 ರಾಷ್ಟ್ರೀಯ ಇಂಜಿನಿಯರ್ ಗಳ ದಿನ

                         ಭಾರತದ ಅಸಂಖ್ಯ ಭೂಪ್ರದೇಶಕ್ಕೆ ನೀರು ಹರಿಸಿದ ಭಗೀರಥನಾಗಿ,ಪ್ರತಿಯೊಬ್ಬ ಪ್ರಜೆಗೆ ಮೂಲಭೂತ ಶಿಕ್ಷಣ ನೀಡಲು ಶ್ರಮಿಸಿದ ಶಿಕ್ಷಣತಜ್ಞನಾಗಿ,ಬ್ರಿಟಿಷರ ಕಾಲದಲ್ಲೇ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ಹರಿಕಾರನಾಗಿ ನಾಡಿನ ಜನಮನದಲ್ಲಿ ಶಾಶ್ವತವಾಗಿ ನೆಲೆಸಿದವರು,ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ.ಅವರ ಜನ್ಮ ದಿನ ವನ್ನು ಇಂಜಿನಿಯರ್ ಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.
ಮೈಸೂರಿನ ದಿವಾನರೂ,ಮುಖ್ಯ ಇಂಜಿನಿಯರ್ ಆಗಿದ್ದ,ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು 1860ರ ಸೆಪ್ಟೆಂಬರ್-15ರಂದು ಕೋಲಾರದ ಮುದ್ದೇನ ಹಳ್ಳಿಯಲ್ಲಿ ಜನಿಸಿದರು. ತಂದೆ ಶ್ರೀನಿವಾಸ ಶಾಸ್ತ್ರಿ,ತಾಯಿ ವೆಂಕಟ ಲಕ್ಷ್ಮಿ.

Hindi Divas


ಸೆಪ್ಟೆಂಬರ್-14 ಹಿಂದಿ ದಿನ

ಸೆಪ್ಟೆಂಬರ್ 14ನ್ನು ದೇಶದಾದ್ಯಂತ ಹಿಂದಿ ದಿನವನ್ನಾಗಿ ಆಚರಿಸಲಾಗುತ್ತಿದೆ.ಭಾರತದಲ್ಲಿ ಹೆಚ್ಚಿನ ಜನರ ಮಾತೃಭಾಷೆ ಹಿಂದಿಯಾಗಿದ್ದು,1949ರ ಸೆಪ್ಟೆಂಬರ್ 14ರಂದು ಈ ಭಾಷೆಯನ್ನು ಸಂವಿಧಾನದ ಅಧಿಕೃತ ಆಡಳಿತ ಭಾಷೆಯನ್ನಾಗಿ ಅಂಗೀಕರಿಸಲಾಯಿತು.1950ರ ಆರ್ಟಟಿಕಲ್343ರಂತೆ ದೇವನಾಗರಿ ಲಿಪಿಯ ಹಿಂದಿಯನ್ನು ದೇಶ ಬಾಷೆಯಾಗಿ ಜ್ಯಾರಿಗೆ ತರಲಾಯಿತು.ತ್ರಿಭಾಷಾ ಸೂತ್ರದನ್ವಯ ಹಿಂದಿ,ಇಂಗ್ಲಿಷ್,ಮಾತೃ ಭಾಷೆಯನ್ನು ಶಾಲಾ ಪಠ್ಯ ಕ್ರಮದಲ್ಲಿ ಅಳವಡಿಸಲಾಯಿತು.
ಒಂದು ಭಾಷೆಯು ಒಂದು ಸಂಸ್ಕೃತಿಯನ್ನು ಬಿಂಬಿಸಿ ಬೆಳೆಸಲು ಸಹಕಾರಿಯಾಗಿದ್ದು,ಎಲ್ಲಾ ಭಾಷೆಗಳನ್ನು ಪ್ರೋತ್ಸಾಹಿಸಿ ಸುಂದರ ಸಮಾಜ ನಿರ್ಮಿಸೋಣ.