NEWS FLASH

/home/student/Desktop/Flash.gif ನಮ್ಮ ಶಾಲೆಯ ನೂತನ ಎರಡು ಬ್ಲಾಗುಗಳು ಶುಭಾರಂಭಗೊಂಡಿವೆ="https://www.11264ssaupschevar.blogspot.com">&www.chevarschool.blogspot.com.........OUR TWO NEW BLOGS LAUNCHED.VISIT US..

VISIT OUR BLOG

ನಮ್ಮ ಇನ್ನೊಂದು ಬ್ಲಾಗನ್ನು ವೀಕ್ಷಿಸಿ.....www.11264ssaupschevar.blogspot.in............

Monday, September 15, 2014

Hindi Divas


ಸೆಪ್ಟೆಂಬರ್-14 ಹಿಂದಿ ದಿನ

ಸೆಪ್ಟೆಂಬರ್ 14ನ್ನು ದೇಶದಾದ್ಯಂತ ಹಿಂದಿ ದಿನವನ್ನಾಗಿ ಆಚರಿಸಲಾಗುತ್ತಿದೆ.ಭಾರತದಲ್ಲಿ ಹೆಚ್ಚಿನ ಜನರ ಮಾತೃಭಾಷೆ ಹಿಂದಿಯಾಗಿದ್ದು,1949ರ ಸೆಪ್ಟೆಂಬರ್ 14ರಂದು ಈ ಭಾಷೆಯನ್ನು ಸಂವಿಧಾನದ ಅಧಿಕೃತ ಆಡಳಿತ ಭಾಷೆಯನ್ನಾಗಿ ಅಂಗೀಕರಿಸಲಾಯಿತು.1950ರ ಆರ್ಟಟಿಕಲ್343ರಂತೆ ದೇವನಾಗರಿ ಲಿಪಿಯ ಹಿಂದಿಯನ್ನು ದೇಶ ಬಾಷೆಯಾಗಿ ಜ್ಯಾರಿಗೆ ತರಲಾಯಿತು.ತ್ರಿಭಾಷಾ ಸೂತ್ರದನ್ವಯ ಹಿಂದಿ,ಇಂಗ್ಲಿಷ್,ಮಾತೃ ಭಾಷೆಯನ್ನು ಶಾಲಾ ಪಠ್ಯ ಕ್ರಮದಲ್ಲಿ ಅಳವಡಿಸಲಾಯಿತು.
ಒಂದು ಭಾಷೆಯು ಒಂದು ಸಂಸ್ಕೃತಿಯನ್ನು ಬಿಂಬಿಸಿ ಬೆಳೆಸಲು ಸಹಕಾರಿಯಾಗಿದ್ದು,ಎಲ್ಲಾ ಭಾಷೆಗಳನ್ನು ಪ್ರೋತ್ಸಾಹಿಸಿ ಸುಂದರ ಸಮಾಜ ನಿರ್ಮಿಸೋಣ.


Monday, September 8, 2014

ONAM CELEBRATION



ಚೇವಾರು ಶಾಲೆಯಲ್ಲಿ ಓಣಂ ಆಚರಣೆ

ಕುಂಬಳೆ: ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓಣಂ ಹಬ್ಬವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಕಾರ್ಯಕ್ರಮವನ್ನು ಶಾಲಾ ಮುಖ್ಯಶಿಕ್ಷಕರಾದ ಶ್ಯಾಮ ಭಟ್ ಉದ್ಘಾಟಿಸಿದರು.ಎಲ್ಲಾ ತರಗತಿಗಳಲ್ಲೂ ವಿದ್ಯಾರ್ಥಿಗಳು ಹೂವಿನ ರಂಗೋಲಿ ರಚಿಸಿದರು.ತದನಂತರ ವಿದ್ಯಾರ್ಥಿಗಳು, ಮಹಾಬಲಿ ಚಕ್ರವರ್ತಿ ಹಾಗೂ ಇತರ ವಿವಿಧ ವೇಷಗಳನ್ನು ಧರಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.ಶಿಕ್ಷಕ ಕಾರ್ಯದರ್ಶಿ ಸ್ಕೌಟ್ ಅಧ್ಯಾಪಕ ವಿನೋದ್ ರ ನೇತೃತ್ವದಲ್ಲಿ ಮೆರವಣಿಗೆಯನ್ನು ಏರ್ಪಡಿಸಲಾಯಿತು. ಶಿಕ್ಷಕರಾದ ಶಂಕರ ನಾರಾಯಣ ಭಟ್,ಶ್ರೀಮತಿ ಸರಸ್ವತಿ, ಶ್ರೀಮತಿ ರಾಜೇಶ್ವರಿ ಶ್ರೀಮತಿ ಪ್ರಮೀಳಾ,ರವಿಕುಮಾರ್,ಪ್ರಸಾದ್ ರೈ, ಶ್ರೀಮತಿ ಪುಷ್ಪಲತಾ,ಗೋಪಾಲ ಕೃಷ್ಣ ಭಟ್ ಸಹಕರಿಸಿದರು.



ಚೇವಾರು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ಕುಂಬಳೆ: ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಸಭಾಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಪರಮೇಶ್ವರ ಪಾವಲುಕೋಡಿ ವಹಿಸಿದರು.ಪೈವಳಿಕೆ ಪಂಚಾಯತು ಸದಸ್ಯೆ ಶ್ರೀಮತಿ ಸುಬೈದಾ ಯಂ.ಪಿ, ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮುಖ್ಯಶಿಕ್ಷಕ ಶ್ರೀ ಶ್ಯಾಮಭಟ್,ದಿನದ ಮಹತ್ವವನ್ನು ವಿವರಿಸಿದರು.ಇದೇ ಸಂದರ್ಭದಲ್ಲಿ  ವಿದ್ಯಾರ್ಥಿಗಳು, ಶಿಕ್ಷಕರ ದಿನಾಚರಣೆ ಅಂಗವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣವನ್ನು ಆಲಿಸಿದರು.ನಂತರ ವಿದ್ಯಾರ್ಥಿಗಳು ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದರು.ಶಂಕರನಾರಾಯಣ ಭಟ್ ಅತಿಥಿಗಳನ್ನು ಸ್ವಾಗತಿಸಿದರು.ರವಿಕುಮಾರ್ ವಂದಿಸಿದರು.ಚೇವಾರು ವಿನೋದ ಕಾರ್ಯಕ್ರಮವನ್ನು ನಿರೂಪಿಸಿದರು.

Monday, September 1, 2014


ಗಣಿತ ಸೆಮಿನಾರ್-2014
ಶಾಲಾ ಮಟ್ಟದ ಗಣಿತ ಸೆಮಿನಾರ್ 25-08-2014 ರಂದು ಗಣಿತ ಕ್ಲಬ್ ನ ಆಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ಜರಗಿತು.ಉದ್ಘಾಟನೆಯನ್ನು,ಅಧ್ಯಾಪಕ ರವಿಕುಮಾರ್ ನೆರವೇರಿಸುತ್ತಾ,ಗಣಿತದ ಕುರಿತು ಆಳವಾದ ಜ್ಞಾನ ಪಡೆಯಲು,ಸೆಮಿನಾರ್ ಸಹಕಾರಿ,ಇದರಿಂದಾಗಿ ಜ್ಞಾನವು ಹೆಚ್ಚಾಗುವುದರೊಂದಿಗೆ, ಗಣಿತದಲ್ಲಿ ಆಸಕ್ತಿ ಬೆಳೆಯುವುದೆಂದು,ಅಭಿಪ್ರಾಯ ಪಟ್ಟರು.
ಯು.ಪಿ ವಿಭಾಗದ ವಿದ್ಯಾರ್ಥಿಗಳು,ಸೆಮಿನಾರನ್ನು ಮಂಡಿಸಿದರು.ಬಿಂದು ಸ್ವಾಗತಿಸಿದಳು.ಆದರ್ಷ ವಂದಿಸಿದನು.ಕ್ಷಿತೀಶ ಸಿ.ಯಸ್ ಪ್ರಥಮ,ಅಕ್ಷತ.ಕೆ ಹಾಗೂ ವಿದ್ಯಾಶ್ರೀ ದ್ವಿತೀಯ ಸ್ಥಾನ ಪಡೆದರು.

National Sports Day


ರಾಷ್ಟ್ರೀಯ ಕ್ರೀಡಾದಿನ

ಭಾ
ರತ ಕಂಡ ಅಪರೂಪದ ಹಾಕಿ ಆಟಗಾರ ಧ್ಯಾನ್ ಚಂದ್ ಅವರ ಹುಟ್ಟಿದ ದಿನವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸಲಾಗುತ್ತಿದೆ. ಧ್ಯಾನ್ ಚಂದ್ ರು 1905 ರ ಆಗಸ್ಟ್ 29ರಂದು ಜನಿಸಿದರು.ಇವರಿದ್ದ ಹಾಕಿ ತಂಡ,ಸತತವಾಗಿ ಮೂರು ಬಾರಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಭಾರತದ ಹಿರಿಮೆಯನ್ನು ಹೆಚ್ಚಿಸಿತು. ಧ್ಯಾನ್ ಚಂದ್ ಅವರಿಗೆ,ಸ್ವಾತಂತ್ರ್ಯಾನಂತರ ಪದ್ಮ ಭೂಷಣ ಪ್ರಶಸ್ತಿ ನೀಡಲಾಯಿತು.ಇವರು 50ಮತ್ತು60ರ ದಶಕದಲ್ಲಿ,ಭಾರತ ತಂಡಕ್ಕೆ ತ ರಬೇತಿ ನೀಡಿದ್ದರು.1979ರ ಡಿಸೆಂಬರ್ 5 ರಂದು ಅಸ್ತಂಗತರಾದರು.
ರಾಷ್ಟ್ರೀಯ ಕ್ರೀಡಾದಿನದಂದು ಶ್ರೇಷ್ಠ ಆಟಗಾರರಿಗಿರುವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ,ಅರ್ಜುನ ಪ್ರಶಸ್ತಿ,ಏಕಲವ್ಯ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ನಾವು ಕೂಡ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ ದೇಶವನ್ನು ಕ್ರೀಡಾ ಕ್ಷೇತ್ರದಲ್ಲಿ ಮಿಂಚಿಸೋಣ