ಚೇವಾರಿನಲ್ಲಿ ಧರೆಗಿಳಿದ ಚಂದ್ರ ಮಾನವ
ಜುಲೈ21ರ ಚಾಂದ್ರ ದಿನವನ್ನು ನಮ್ಮಶಾಲೆಯಲ್ಲಿ ವಿಶಿಷ್ಟ
ರೀತಿಯಲ್ಲಿ ಆಚರಿಸಲಾಯಿತು.ಶಾಲಾ ಎಸೆಂಬ್ಲಿಯಲ್ಲಿ ದಿನದ ಮಹತ್ವವನ್ನು ವಿವರಿಸಲಾಯಿತು.ತದ ನಂತರ
ಚಂದ್ರಯಾನದ ವಿವಿಧ ಹಂತಗಳ ವೀಡಿಯೋ ಪ್ರದರ್ಶನ ಏರ್ಪಡಿಸಲಾಯಿತು.ಬಾಹ್ಯಾಕಾಶಕ್ಕೆ ಸಂಬಂಧಿಸಿದ
ರಸಪ್ರಶ್ನೆ ಸ್ಪರ್ಧೆ ನಡೆಸಲ್ಪಟ್ಟಿತು
.
ಸಂಜೆ ನಡೆದ ಸಭಾಕಾರ್ಯಕ್ರಮವನ್ನುಶಾಲಾ ಮುಖ್ಯ
ಶಿಕ್ಷಕರಾದ ಶ್ಯಾಮ ಭಟ್ ಉದ್ಘಾಟಿಸಿ, ಮಕ್ಕಳು ಎಳವೆಯಲ್ಲಿಯೇ ಸಂಶೋಧನಾತ್ಮಕ ಗುಣವನ್ನು
ಬೆಳಸಬೇಕೆಂದು ಕರೆಯಿತ್ತರು.ಸಭಾಧ್ಯಕ್ಷರಾಗಿದ್ದ ಹಿರಿಯ ಅಧ್ಯಾಪಕ,ಶಂಕರನಾರಾಯಣ ಭಟ್
ಮಾತನಾಡಿ,ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ಮನುಷ್ಯ ಎಷ್ಟು ಮುಂದುವರಿದಿದ್ದಾನೆಂಬುದು ಇದರಿಂದ ಸಾಬೀತಾಗಿದೆಯೆಂದು ಅಭಿಪ್ರಾಯಪಟ್ಟರು.
ಸಭೆಗೆ ಆಗಮಿಸಿದ ವಿಶೇಷ ಉಡುಪುಧಾರಿ
ಗಗನಯಾತ್ರಿಯು ಎಲ್ಲರನ್ನೂ ಮಂತ್ರ ಮುಗ್ದರನ್ನಾಗಿಸಿದನು.ಮಕ್ಕಳೆಲ್ಲರೂ ಕುತೂಹಲದಿಂದ ಗಗನ
ಯಾನ,ಚಂದ್ರನ ನೆಲ,ವಾತಾವರಣದ ಕುರಿತಾಗಿ ಅನೇಕ ಪ್ರಶ್ನೆಗಳನ್ನು ಕೇಳಿದರು.ಗಗನಯಾತ್ರಿಯು,ಸಾವಕಾಶವಾಗಿ
ಉತ್ತರಿಸಿದನು.ತನ್ನಅನುಭವವನ್ನು ಮನಮುಟ್ಟುವಂತೆ ವಿವರಿಸಿದನು.ವಿದ್ಯಾರ್ಥಿಗಳಾದ ಕ್ಷಿತೀಷ,ಅಕ್ಷತ,ಜೈನಬತ್
ಅಸ್ಮೀನಾ,ಆದರ್ಷ,ಚಂದ್ರನ ಕುರಿತತಾದ ಪ್ರಬಂಧಗಳನ್ನು ಮಂಡಿಸಿದರು.ರಸಪ್ರಶ್ನೆ ವಿಜೇತರನ್ನು
ಅಭಿನಂದಿಸಲಾಯಿತು.ವಿಜ್ಞಾನ ಕ್ಲ ಬ್ ಕಾರ್ಯದರ್ಶಿ ಅತಿಥಿಗಳನ್ನು ಸ್ವಾಗತಿಸಿದಳು.ಜತೆ
ಕಾರ್ಯದರ್ಶಿ ವಂದಿಸಿದನು.