NEWS FLASH

/home/student/Desktop/Flash.gif ನಮ್ಮ ಶಾಲೆಯ ನೂತನ ಎರಡು ಬ್ಲಾಗುಗಳು ಶುಭಾರಂಭಗೊಂಡಿವೆ="https://www.11264ssaupschevar.blogspot.com">&www.chevarschool.blogspot.com.........OUR TWO NEW BLOGS LAUNCHED.VISIT US..

VISIT OUR BLOG

ನಮ್ಮ ಇನ್ನೊಂದು ಬ್ಲಾಗನ್ನು ವೀಕ್ಷಿಸಿ.....www.11264ssaupschevar.blogspot.in............

Saturday, October 11, 2014



ವಿಶ್ವ ದೃಷ್ಟಿ ದಿನಾಚರಣೆ

ವಿಶ್ವ ದೃಷ್ಟಿ ದಿನಾಚರಣೆಯನ್ನು ಅಕ್ಟೋಬರ್ ತಿಂಗಳ 2ನೇ ಗುರುವಾರದಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
ಅಂಧತ್ವತನ ಇನ್ನು ಮುಂದಿಲ್ಲದಂತೆ ತಡೆಗಟ್ಟೋಣಎಂಬ ಘೋಷಣಾ ವಾಕ್ಯದೊಂದಿಗೆ ವಿಶ್ವ ದೃಷ್ಟಿ ದಿನಾಚರಣೆಯನ್ನು ಈ ವರ್ಷ ಆಚರಿಸ ಲಾಗುತ್ತಿದೆ.ಕಣ್ಣು ಎಂಬುದು ಪಂಚೇಂದ್ರಿಯಗಳಲ್ಲಿ ಒಂದು ಅಂಗವಾಗಿದೆ.ಕಣ್ಮ ಲ್ಲದವರಸು ಜೀವಿಸುವುದು ಬಹಳ ಕಷ್ಟದಿಂದ.ಟಿ.ವಿಯನ್ನು ಅತೀ ಹತ್ತಿರದಿಂದ ವೀಕ್ಷಿಸುವುದರಿಂದ,ಪ್ರಖರ ಬೆಳಕನ್ನು ನೇರವಾಗಿ ನೋಡುವುದರಂದ,ಅರೆ ಬೆಳಕಿನಲ್ಲಿ ಓದುವುದರಿಂದ,ಕಣ್ಣಿನ ದೃಷ್ಟಿ ದೋಷ ಉಂಟಾಗುತ್ತದೆ. ವಿಶ್ವದ ಶೇಕಡಾ 80ರಷ್ಟು ಅಂಧತ್ವವನ್ನು ಚಿಕಿತ್ಸೆ ಮೂಲಕ ನಿವಾರಿಸ ಬಹುದು.ಮರಣದ ನಂತರ ನಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಅಂಧರ ಬೀಳನ್ನು ಬೆಳಗಿಸಬಹುದು.


Tuesday, October 7, 2014

ವನ್ಯಜೀವಿ ಸಪ್ತಾಹ


ಅಕ್ಟೋಬರ್ 1 ರಿಂದ 7.ವನ್ಯಜೀವಿ ಸಪ್ತಾಹ

    ಭೂಮಿಯ ಮೇಲೆ ವಿವಿಧ ಪ್ರಭೇದಗಳ ಜೀವರಾಶಿಗಳಿವೆ.ಇವುಗಳಲ್ಲಿ ವನ್ಯ ಜೀವಿಗಳೂ ಸೇರಿವೆ.ಭೂಮಿಯ ಮೇಲೆ ಬದುಕುವ ಹಕ್ಕು ಮನುಷ್ಯರಂತೆಯೇ,ಇತರಜೀವಿಗಳಿಗೂ ಇದೆ.ಕಾಡು ಅನೇಕ ವನ್ಯ ಜೀವಿಗಳ ಆಶ್ರಯತಾಣವಾಗಿದೆ.ಹುಲಿ,ಸಿಂಹ,ಕರಡಿ,ಮಂಗ,ಚಿರತೆ,ಜೀಬ್ರಾ ಮುಂತಾದ ಅನೇಕಜೀವಿಗಳಿಗೆ ಬದುಕಲು ಕಾಡು ಬೇಕು.ಕಾಡು ಪ್ರಾಣಿಗಳ ರಕ್ಷಣೆಯ ನಿಟ್ಟಿನಲ್ಲಿ ಅಕ್ಟೋಬರ್ 1ರಿಂದ 7ರ ತನಕ ವನ್ಯ ಜೀವಿ ಸಪ್ತಾಹವನ್ನು ಆಚರಿಸಲಾಗುತ್ತಿದೆ.1977ರಲ್ಲಿಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಬಂದ ನಂತರ ವನ್ಯ ಜೀವಿಗಳು ಅರಣ್ಯ ಸಂಪತ್ತು ಉಳಿಯಲು ಕಾರಣವಾಯಿತು.ಆಹಾರ ಸರಪಳಿಯಲ್ಲಿ ಎಲ್ಲಾ ಜೀವಿಗಳು ಒಳಗೊಂಡಿವೆ.
ವನ್ಯ ಜೀವಿಗಳ ಅಳಿವಿಗೆ,ಮನುಷ್ಯನು ಕಾರಣನಾಗುತ್ತಿರುವುದು ಬೇಸರದ ಸಂಗತಿಯಾಗಿದೆ.ಗಾಂಧೀಜಿಯವರ ನೆನಪಿನಲ್ಲಿ ಆರಂಭವಾದ ಈ ವನ್ಯ ಜೀವಿ ಸಂರಕ್ಷಣಾ ಸಪ್ತಾಹವು ಫಲಪ್ರದವಾಗಲಿ,ವನ್ಯ ಜೀವಿಗಳು ಇನ್ನಷ್ಟು ಹೆಚ್ಚಾಗಲಿ ಎಂಬುದೇ ನಮ್ಮೆಲ್ಲರ ಆಶಯ.

Gandhi Jayanthi


ಚೇವಾರು:ಗಾಂಧೀ ಜಯಂತಿ ಆಚರಣೆ

ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧೀ ಜಯಂತಿಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಶಾಲಾ ಎಸೆಂಬ್ಲಿಯಲ್ಲಿ,ಸ್ವಚ್ಛತಾ ಅಭಿಯಾನದ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಪೈವಳಿಕೆ ಪಂಚಾಯತು ಸದಸ್ಯೆ  ಸುಬೈದಾ ಟೀಚರ್  ನೆರವೇರಿಸಿ, ಗಾಂಧೀಜಿಯವರು ಜೀವನದಲ್ಲಿ ಪಾಲಿಸಿದ ಸತ್ಯ,ಶಾಂತಿ,ಅಹಿಂಸೆ,ಪ್ರೇಮ,ಸರಳತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆಯಿತ್ತರು.ಪಿ.ಟಿ.ಎ. ಅಧ್ಯಕ್ಷ ಪರಮೇಶ್ವರ ಪಾವಲುಕೋಡಿ ಅಧ್ಯಕ್ಷತೆ ವಹಿಸಿದರು.ಮುಖ್ಯ ಅತಿಥಿಗಳಾಗಿ ,ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘದ ಅಧಿಕಾರಿ ಭರತ್ ಕುಂದಾಪುರ ಮತ್ತು ಮಾತೃ ರಕ್ಷಕ ಸಂಘದ ಅಧ್ಯಕ್ಷೆ ಇಂದಿರಾ ಶುಭಾಶಂಸನೆಗೈದರು. ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಸ್ವಾಗತಿಸಿದರು. ಶಿಕ್ಷಕಿ ರಾಜೇಶ್ವರಿ ವಂದಿಸಿದರು. ಶಿಕ್ಷಕ ವಿನೋದ್ ಚೇವಾರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಗಾಂಧೀಜಿಯವರ ಭಾವ ಚಿತ್ರಕ್ಕೆ,ವಿದ್ಯಾರ್ಥಿಗಳು,ಶಿಕ್ಷಕರು,ರಕ್ಷಕರು ಪುಷ್ಪಾರ್ಚನೆಗೈದು ಗೌರವ ಸಲ್ಲಿಸಿದರು.ಪರಿಸರ ಶುಚೀಕರಣ ಮತ್ತು ಗಾಂಧೀಜಿ ಕುರಿತಾದ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಯಿತು.